ಇಂಗ್ಲೀಷ್ ಸಾಹಿತ್ಯದಲ್ಲಿ ಪತ್ತೇದಾರಿ ಮತ್ತು ಥ್ರಿಲ್ಲರ್ ಕಾದಂಬರಿಗಳಿಗೆ ಅದರದೇ ಆದ ಸ್ಥಾನವಿದೆ. ಜೇಮ್ಸ್ ಹ್ಯಾಡ್ಲಿ ಚೇಸ್, ಅಗಾಥ ಕ್ರಿಸ್ಟಿ, ಅರ್ಲಿ ಸ್ಟಾನ್ಲಿ, ಸಿಡ್ನಿ ಶೆಲ್ಡನ್, ಜಾನ್ ಗ್ರೀಶಮ್, ಆರ್ಥರ್ ಹೇಲಿ... ಹೀಗೆ ಉದ್ದಕ್ಕೆ ಸಾಗುತ್ತದೆ ಪಟ್ಟಿ. ಸದ್ಯ ಥ್ರಿಲ್ಲರ್‍ಗಳನ್ನು ಬರೆಯುವವರಲ್ಲಿ ಪ್ರಚಲಿತದಲ್ಲಿರುವ ಹೆಸರು `ಜೆಫ್ರಿ ಆರ್ಚರ್'. ೧೯೪೫ ರಲ್ಲಿ ಲಂಡನಿನಲ್ಲಿ ಜನಿಸಿದ ಆರ್ಚರ್ ಸುಮಾರು ೧೮ ಕಾದಂಬರಿಗಳನ್ನು ರಚಿಸಿದ್ದಾರೆ. ೨೦೦೯ರ ಮಾರ್ಚ್ ಮೂರರಂದು ಬಿಡಿಗಡೆಯಾದ ಇವರ ಕಾದಂಬರಿ `ದಿ ಪಾಥ್ ಆಫ್ ಗ್ಲೋರಿ'
ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಕಾದಂಬರಿಯನ್ನು ರಚಿಸುವ ಆರ್ಚರ್ ಮೂಲತ: ಒಬ್ಬ ರಾಜಕಾರಿಣಿ. ಕನ್ಸರ್ವೇಟಿವ್ ಪಾರ್ಟಿಯ ಮುಂದಾಳಾಗಿರುವ ಇವರು ಅಧ್ಯಾಪಕ, ನಾಟಕಕಾರ, ನಟನಾಗಿಯೂ ಹೆಸರುಗಳಿಸಿದವರು. ರಾಜಕೀಯ ಡೊಂಬರಾಟದಲ್ಲಿ ವಿರೋಧಗಳ ನಡುವೆ ನಲುಗಿ ಅಪರಾಧದ ಆರೋಪದಲ್ಲಿ ಬದುಕಬೇಕಾದಾಗ, ರಾಜಕೀಯಕ್ಕೆ ವಿದಾಯ ಸೂಚಿಸಿದವರು. ತಮ್ಮ ವಿದ್ಯಾಭ್ಯಾಸ ಮುಗಿದ ಬಳಿಕ ಭೂಸೇನೆ ಮತ್ತು ಪೊಲೀಸ್ ಇಲಾಖೆಗಳಲ್ಲಿ ತರಬೇತು ಪಡೆದು ಮುಂದೆ ಅದು ತನಗೆ ಒಗ್ಗದೆಂದು ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕನಾಗಿ ಸೇರಿದರು.
ಆಕ್ಸ್‍ಫರ್ಡ್‍ನಲ್ಲಿ ಉನ್ನತ ಶಿಕ್ಷಣ ಮುಗಿಸಿದ ಆರ್ಚರ್ ನಂತರ ಬಾಳ ಸಂಗಾತಿಯಾಗಿ ವಿಜ್ಞಾನಿ, ಮೇರಿ ಆರ್ಚರ್‍ರನ್ನು ಮದುವೆಯಾದರು. ಬಳಿಕ ಸಣ್ಣ ಉದ್ಯೋಗ ಹಿಡಿದ ಅವರು ಅದರಿಂದ ಸಮಾಧಾನಿತರಾಗದೆ ಸ್ವತ: ತಾವೇ ಅಂತಹ ಒಂದು ಸಂಸ್ಥೆಯನ್ನು ಸ್ಥಾಪಿಸಿದರು. ಆ ಸಂಸ್ಥೆಯಿಂದ ಒಂದು ಆರ್ಟ್ ಗ್ಯಾಲರಿಯನ್ನು ತೆರೆದು ಆಧುನಿಕ ಕಲೆಗಾರಿಕೆಗೆ ಪ್ರೋತ್ಸಾಹ ನೀಡಿದರು. ಆದರೆ ಸಂಸ್ಥೆ ನಷ್ಟದಲ್ಲಿ ನಡೆಯಬೇಕಾದಾಗ ಪರಿಸ್ಥಿತಿ ಎದುರಾದಾಗ ಅದನ್ನು ಮಾರಬೇಕಾಯಿತು. ತನ್ನ ೨೯ನೇ ವರ್ಷದಲ್ಲಿ ರಾಜಕೀಯ ಪ್ರವೇಶಿಸಿದ ಆರ್ಚರ್, ತಮ್ಮ ಪಾರ್ಟಿಯ ಕಾರ್ಯನೀತಿಗೆ ವಿರೋಧವಾಗಿ ನಡೆದು ಅಲ್ಲಿಂದ ಹೊರಗೆ ಬರಬೇಕಾಯಿತು.
ರಾಜಕೀಯ ನಂಟು ಅವರನ್ನು ಅಷ್ಟು ಸುಲಭವಾಗಿ ಬಿಡುವಂತೆ ಕಾಣಲಿಲ್ಲ. ರಾಜಕೀಯದ ಜೊತೆಗೂ ಅವರು ಸಾಹಿತ್ಯದತ್ತ ಒಲವು ತೋರಿಸಿದರು. ತಮ್ಮ ಬದುಕಿನಲ್ಲಿ ನಡೆದ ಕಹಿ ಘಟನೆಗಳನ್ನು ಆಧರಿಸಿಕೊಂಡೇ ತಮ್ಮ ಮೊದಲ ಕಾದಂಬರಿ `ನಾಟ್ ಎ ಪೆನ್ನಿ ಮೋರ್, ನಾಟ್ ಎ ಪೆನ್ನಿ ಲೆಸ್ಸ್' ಅನ್ನುವ ಕಾದಂಬರಿಯನ್ನು ಬರೆದರು. ಮೊದಲ ಬಾರಿಗೆ ಅಮೆರಿಕಾದ ಪುಸ್ತಕ ಪ್ರಕಾಶನವೊಂದು ಕಾದಂಬರಿಯನ್ನು ಪ್ರಕಟಿಸಿತು. ಮೊದಲ ಕೃತಿಯೇ ಜಯಭೇರಿ ಗಳಿಸಿತು. ತದ ನಂತರ ಅದನ್ನು ಬ್ರಿಟನ್ ಪುಸ್ತಕ ಸಂಸ್ಥೆಯೂ ಪ್ರಕಟಿಸಿ ಅವರಿಗೆ ಹೆಸರನ್ನು ತಂದು ಕೊಟ್ಟಿತು. ೧೯೮೦ರ ದಶಕದ ಮೊದಲಲ್ಲಿ ಟೆಲಿ ಮತ್ತು ಬಾನುಲಿಗಳಲ್ಲಿಯೂ ಅದು ಪ್ರಸಾರವಾಗಿ ಅಪಾರ ಜನಪ್ರಿಯತೆಯನ್ನು ಗಳಿಸಿಕೊಟ್ಟಿತು. ಅದೇ ಸಮಯದಲ್ಲಿ ಟೊರೆಂಟೋದ ಅಕ್ವಾ ಬ್ಲಾಸ್ಟ್ ಕೇಸ್‍ನ ಸಾಕ್ಷಿಯಾಗಿದ್ದ ಆರ್ಚರ್ ಅಪರಾಧಿ ಸ್ಥಾನದಲ್ಲಿ ನಿಂತು ಅದನ್ನು ಎದುರಿಸಬೇಕಾಯಿತು. ಕೊನೆಗೆ ಅದನ್ನು ಧೈರ್ಯದಿಂದ ಎದುರಿಸಿ ನಿರಪರಾಧಿಯಾಗಿ ಹೊರಗೆ ಬಂದು `ಕೇನ್ ಅಂಡ್ ಎಬಲ್' ಅನ್ನುವ ಜನಪ್ರಿಯ ಕಾದಂಬರಿಯನ್ನು ಬರೆದರು. ಆ ಕಾದಂಬರಿ ಕೂಡ ಟೆಲಿ ಧಾರಾವಾಹಿಯಾಗಿ ಪ್ರಸಾರವಾಯಿತು. ಮುಂದೆ ನಾಲ್ಕು ಜನ ಯುವಕರು ಮತ್ತು ಪ್ರದಾನ ಮಂತ್ರಿಯಾಗುವ ಅವರ ಹುಡುಕಾಟ ಇದರ ಸುತ್ತಾ ಹೆಣೆದ ಕಥಾಹಂದರವಿರುವ `ಫಸ್ಟ್ ಎಮಾಂಗ್ ಈಕ್ವಲ್ಸ್' ಪ್ರಕಟವಾಯಿತು. ತಮ್ಮ ಸಮಯವನ್ನು ಬರೆಯುವುದು ಮತ್ತು ಮರು ಬರೆಯುವುದರಲ್ಲಿಯೇ ತೊಡಗಿಸಿಕೊಂಡ ಆರ್ಚರ್ ನಂತರದ ದಿನಗಳಲ್ಲಿ ದಿ ಪ್ರೊಡಿಗಲ್ ಡಾಟರ್, ಎ ಮ್ಯಾಟರ್ ಆಫ್ ಆನರ್, ಬಿಯಾಂಡ್ ರೀಸನೇಬಲ್ ಡೌಟ್, ಆಸ್ ದಿ ಕ್ರೊ ಫ್ಲೈಸ್, ದಿ ಇಲವೆಂಥ್ ಕಮಾಂಡ್‍ಮೆಂಟ್, ಎ ಪ್ರಿಸಿನರ್ ಆಫ್ ಬರ್ಥ್ ಮುಂತಾದ ಕಾದಂಬರಿಗಳಲ್ಲದೆ ದಿ ಫೋರ್ಥ್ ಎಸ್ಟೇಟ್ ನಂತಹ ಪುಸ್ತಕವನ್ನೂ ಬರೆದಿದ್ದಾರೆ. ಜೊತೆಗೆ ಐದು ಕಥಾ ಸಂಕಲನಗಳು ಕೂಡ ಹೊರ ಬಂದಿವೆ.
ಬರವಣಿಗೆಯ ಜೊತೆಗೆ ವಿವಾದಗಳನ್ನೂ ಎದುರಿಸುತ್ತಾ ಬಂದಿರುವ ಆರ್ಚರ್ ಸಾಹಿತ್ಯರಂಗದಲ್ಲಿ ಬಲವಾಗಿ ತಳವೂರಿದವರು. ಅನೇಕ ನಾಟಕಗಳು, ಮಕ್ಕಳ ಕಾದಂಬರಿಗಳನ್ನು ಬರೆದಿರುವ ಇವರು ವರ್ಷಕ್ಕೊಂದರಂತೆ ಕೃತಿಗಳನ್ನು ರಚಿಸುತ್ತಿದ್ದಾರೆ.
ಕಳೆದ ಮಾರ್ಚ್ ಮೂರರಂದು ಬಿಡುಗಡೆಯಾದ ಇವರ ಕಾದಂಬರಿ `ದಿ ಪಾಥ್ ಆಫ್ ಗ್ಲೋರಿ'. ನೈಜ್ಯ ಘಟನೆಯೊಂದನ್ನು ಆಧರಿಸಿ ಬರೆದ ಕಾದಂಬರಿ ಇದು. ಈ ಕಾದಂಬರಿಯ ಮುಖ್ಯ ಕಥಾವಸ್ತು ಮೌಂಟ್ ಎವರೆಸ್ಟನ್ನು ಏರುವ ಸಾಹಸಿ ಜೋರ್ಜ್ ಮೆಲೊರಿ ಕುರಿತಾಗಿದೆ. ಇಬ್ಬರು ಹುಡುಗಿಯರ ಪ್ರೀತಿಯಲ್ಲಿ ಬಿದ್ದು ತನ್ನ ಗುರಿ ಸಾಧಿಸದೆ ಮರೆಯಾಗುವ ಯುವಕ. ಆ ಇಬ್ಬರಲ್ಲಿ ಯಾರೋ ಅವನ ಕೊಲೆ ಮಾಡಿರುತ್ತಾರೆ. ಆ ಕಥೆ ಬಿಚ್ಚಿಕೊಳ್ಳುವುದು ಅವನ ಸತ್ತು ಎಷ್ಟೋ ವರ್ಷಗಳ ಅನಂತರ. ಈ ಕಾದಂಬರಿಯನ್ನು ಓದಿ ಮುಗಿಸಿದ ಬಳಿಕ ಆತನ ಹೆಸರು ಐತಿಹ್ಯದಲ್ಲಿ ಸೇರಬಹುದೆ? ಅನ್ನುವ ಜಿಜ್ಞಾಸೆ ಮೂಡುತ್ತದೆ. ಇದು ಓದುಗರಿಗೆ ಆಪ್ತವೆನಿಸಬಹುದಾದ ಕಾದಂಬರಿ. ಪ್ರಸ್ತುತ ಕನ್ನಡದಲ್ಲಿಯೂ ಆರ್ಚರ್‍ರವರ ಕಾದಂಬರಿಗಳು ಪ್ರಕಟವಾಗಿವೆ.ತನ್ನ ಬದುಕೆ ಒಂದು ಕಾದಂಬರಿಯಂತಿರುವ ಜೆಫ್ರಿ ಆರ್ಚರ್‍ರವರಿಂದ ಇನ್ನಷ್ಟು ಕಾದಂಬರಿಗಳು ಮೂಡಿ ಬರಲಿ ಎಂದು ಆಶಿಸೋಣ.

No comments:
Post a Comment