"3...2...1...LET IT RIP"ಆಧುನಿಕ ಯುಗದಲ್ಲಿ ಮಕ್ಕಳ ಮೆದುಳಿಗೆ ಕಸರತ್ತು ನೀಡಲು ಅದೆಷ್ಟೋ ಆಟಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಆಟಿಕೆಗಳು ಮತ್ತು ಅದರಿಂದ ಆಡುವ ಆಟಗಳು ಪುರಾತನ ಕಾಲದಲ್ಲಿಯೇ ಭಾರತದಲ್ಲಿದ್ದವೆಂದು ನಮ್ಮ ಪುರಾಣಗಳಿಂದ ತಿಳಿದು ಬರುತ್ತದೆ. ಪಗಡೆಯಾಟ, ಬಿಲ್ಲು ಬಾಣ, ಬುಗರಿಯಾಟ ಮುಂತಾದವುಗಳನ್ನು ನಾವು ಬಹಳ ಹಿಂದಿನಿಂದಲೆ ಬಲ್ಲವರಾಗಿದ್ದೇವೆ. ಇಂತಹ ಆಟಗಳು ಇಂದಿನ ಮಕ್ಕಳನ್ನೂ ಆಕರ್ಷಿಸುತ್ತಿವೆ ಎನ್ನುವುದಕ್ಕೆ ಉದಾಹರಣೆಗಳನ್ನು ನೀಡಬಹುದು. ಟಿ.ವಿ.ಯಲ್ಲಿ ರಾಮಾಯಣ ಧಾರಾವಾಹಿ ಆರಂಭವಾದಾಗ ಅದರಲ್ಲಿನ ಬಿಲ್ಲು ಬಾಣಗಳನ್ನು ನೋಡಿ ಮಕ್ಕಳು ಅಂತಹ ಆಟಿಕೆಗಳಿಗೆ ಆಕರ್ಷಿತರಾಗಿದ್ದರು.
ಟಿ.ವಿ. ಮಾಧ್ಯಮವು ಮಕ್ಕಳನ್ನು ಹೆಚ್ಚು ಆಕರ್ಷಿಸಲು ಮುಖ್ಯ ಕಾರಣ ಫ್ಯಾಂಟಸಿ ತುಂಬಿರುವ ಕಾರ್ಟೂನ್ ಚಿತ್ರಗಳು. ಟಾಮ್ ಅಂಡ್ ಜೆರಿ, ವಾಲ್ಟ್ ಡಿಸ್ನೆ, ಡೂಫಿ ಡಕ್‍ಗಳಂತಹ ಅನಿಮೆಟೆಡ್ ಕಾರ್ಟೂನ್ ಚಿತ್ರಗಳು ಬಹು ಬೇಗನೆ ಮಕ್ಕಳ ಮನಸ್ಸನ್ನು ಸೆಳೆಯುವಲ್ಲಿ ಸಫಲವಾಗಿವೆ. ಈಗ ಕಾರ್ಟೂನ್ ಲೋಕಕ್ಕೆ ಹೊಸ ಸೇರ್ಪಡೆಯೆಂದರೆ ಪೋಕೆಮಾನ್ Pokemon. ಯಾವುದೇ ಒಂದು ಪ್ರಾಣಿ ಅಥವಾ ಪಕ್ಷಿಗಳ ಪ್ರತಿರೂಪದಂತಿರುವ ಈ ಹೊಸ ತಳಿಯ ಕಾರ್ಟೂನ್‍ಗಳು ರೂಪಕ್ಕೆ ತಕ್ಕಂತೆ ಆಯಾ ಪ್ರಾಣಿ ಅಥವಾ ಪಕ್ಷಿಯ ಹೆಸರನ್ನು ಹೊಂದಿರುತ್ತವೆ. ಈ ಪೋಕೆಮಾನ್ ಕಾರ್ಟೂನ್‍ಗಳಲ್ಲಿ ನೈಜತೆ ಇರುವುದರಿಂದ ಮಕ್ಕಳು ಮನಸೋತಿರುವುದು ಸಹಜ.
ಇಂತಹ ಅನಿಮೆಟೆಡ್ ಚಿತ್ರಗಳು ಮತ್ತು ಕಾರ್ಟೂನ್‍ಗಳು ಮಕ್ಕಳನ್ನು ಹೊಸದೊಂದು ಲೋಕಕ್ಕೆ ಎಳೆದೊಯ್ಯುತ್ತವೆ. ಮಕ್ಕಳು ಕಣ್ಣು ರೆಪ್ಪೆಗಳನ್ನು ಮುಚ್ಚದೆ ಕುತೂಹಲದಿಂದ ಟಿ.ವಿ.ಯನ್ನು ನೋಡುವಂತೆ ಮಾಡುತ್ತದೆ. ಈ ಕಾರ್ಟೂನ್‍ಗಳನ್ನು ಬಿತ್ತರಿಸುವ ಚಾನೆಲ್‍ಗಳು ನಮ್ಮಲ್ಲಿ ಕಡಿಮೆಯೇನಿಲ್ಲ! ಅದರಲ್ಲೂ ಕಾರ್ಟೂನ್ ನೆಟ್‍ವರ್ಕ್ ಮಕ್ಕಳನ್ನು ಟಿ.ವಿ.ಯ ಮುಂದೆ ಮಾತ್ರವಲ್ಲ ಆಟದ ಬಯಲಿನವರೆಗೂ ಬರುವಂತೆ ಮಾಡಿದೆಯೆಂದರೆ ತಪ್ಪಾಗಲಾರದು. ಇದುವೇ ಕಾರ್ಟೂನ್ ನೆಟ್‍ವರ್ಕ್ ಮೊದಲ ಬಾರಿಗೆ ಚಿಣ್ಣರ ಲೋಕಕ್ಕೆ ಬಣ್ಣದ ಬುಗುರಿ- ಬೇಬ್ಲೇಡನ್ನು ಪರಿಚಯಿಸಿತು.
ಈ ಬೇಬ್ಲೇಡುಗಳೆಂದರೇನು?ಬೇಬ್ಲೇಡ್ ಎಂದರೆ ಬುಗರಿ. ಈ ಆಟವನ್ನು ನಿರ್ದಿಷ್ಟ ಆಟಿಕೆಯಿಂದ ಆಡುವಂತಹುದು. ಇದರಲ್ಲಿ ನಾಜೂಕಿನ (ಸೊಫೊಸ್ಟಿಕೇಟೆಡ್) ಬುಗರಿ (ಬೇಬ್ಲೇಡ್)ಗಳನ್ನು ಗನ್ ಲಾಂಚರ್‍ಗಳ ಮೂಲಕ ಹಾರಿಸಿ, ಬುಗರಿಯನ್ನು ತಿರುಗುವಂತೆ ಮಾಡಲಾಗುತ್ತದೆ. ಈ ಹೆಸರು ಕೇಳುವಾಗಲಂತು ನಮಗೆ ವಿಪರೀತ ಕಲ್ಪನೆ ಬರುವುದು ಸಹಜ. ಆದರೆ ಈ ಬೇಬ್ಲೇಡುಗಳು ಬುಗರಿಗಳ ಮಾದರಿಯೆ!ಕಾಲ ಬದಲಾದಂತೆಲ್ಲಾ ಹೊಸ ಹೊಸ ತಂತ್ರಜ್ಞಾನಕ್ಕೆ ಮನುಷ್ಯ ಹೊಂದಿಕೊಳ್ಳುವಂತೆಯೆ, ಈಗ ಚಿಣ್ಣರಿಗೂ ಹೊಸ ಹೊಸ ಆಟಿಕೆಗಳು ಬರುತ್ತಿವೆ. ಮರದ ಬುಗರಿಗೆ ನೂಲು ಸುತ್ತಿ, ಎಳೆದು ನೆಲದ ಮೇಲೆ ತಿರುಗುವಂತೆ ಮಾಡುವ ಬುಗರಿಯಾಟ ಮಕ್ಕಳಲ್ಲಿ ಆಸಕ್ತಿಯನ್ನು ಕಡಿಮೆ ಮಾಡಿದೆ. ಆದರೆ ಈ ಬೇಬ್ಲೇಡುಗಳು, ಕಿಕ್ ಹೊಡೆಯದೆ, ಬಟನ್ ಒತ್ತಿದ ಕೂಡಲೆ ಸ್ಟಾರ್ಟಾಗುವ ಬೈಕ್‍ಗಳಂತೆ. ಒಮ್ಮೆ ಫಿಕ್ಸ್ ಮಾಡಿ ಗನ್ ಲಾಂಚರ್‍ಗೆ ಸೇರಿಸಿ ಟ್ರಿಗರ್ ಒತ್ತಿದರೆ ಕೆಳಗೆ ಬಿದ್ದು ಗಿರ್ರನೆ ಸುತ್ತುತ್ತವೆ. ಈ ಬಣ್ಣದ ಬುಗರಿಗಳನ್ನು ನೋಡುವುದೇ ಒಂದು ಥ್ರಿಲ್!
ಬೇಬ್ಲೇಡ್‍ಗಳ ಮೂಲ ಇತ್ತೀಚಿನದಲ್ಲ. ಈ ಬೇಬ್ಲೇಡ್‍ಗಳು ಹದಿನೇಳನೆಯ ಶತಮಾನದಲ್ಲಿಯೆ ಚಾಲ್ತಿಯಲ್ಲಿದ್ದವು. ಆ ಕಾಲದಲ್ಲಿ ತಿರುಗುವ ಬುಗರಿಗಳನ್ನು `ಬೆಗೋಮಸ್'(Beigomas) ಎಂದು ಕರೆಯುತ್ತಿದ್ದರು. ಈ ಬೆಗೋಮಸ್‍ಗಳನ್ನು ಸಮುದ್ರದ ಸತ್ತ ಚಿಪ್ಪು ಮೀನು (Spiral Sea Shell) ಗಳ ಒಳಗೆ ಮರಳು ತುಂಬಿಸಿ ಆಡುತ್ತಿದ್ದರು. ಆಗಿನ ಕಾಲದಲ್ಲಿ ಬೆಗೋಮಸ್‍ಗಳು ಜಗದ್ವಿಖ್ಯಾತಿಯನ್ನು ಹೊಂದಿದ್ದವು. ಆದರೆ ಎರಡನೆ ಜಾಗತಿಕ ಯುದ್ಧದಿಂದ ತಲ್ಲಣಗೊಂಡ ಜನರು ಈ ಆಟದಲ್ಲಿ ಆಸಕ್ತಿಯನ್ನು ಕಳೆದುಕೊಂಡರೆನ್ನಬಹುದು.
ಈ ಬೆಗೋಮಸ್‍ಗಳು ಇತ್ತೀಚಿನ ನಾಲ್ಕೈದು ವರ್ಷಗಳ ಹಿಂದೆಯಷ್ಟೆ ಮರುಜನ್ಮ ಪಡೆದುಕೊಂಡು ಬಕುಟೆನ್ ಶೂಟ್ ಎನ್ನುವ ಹೊಸ ಹೆಸರಿನೊಂದಿಗೆ ಜನರನ್ನು ಆಕರ್ಷಿಸತೊಡಗಿದವು. ಈ ಬಕುಟೆನ್ ಶೂಟ್‍ಗಳೆ ಶಾರ್ಟ್ ಅಂಡ್ ಸ್ವೀಟಾಗಿ ಬೇಬ್ಲೇಡ್‍ಗಳೆಂದು ಕರೆಯಲ್ಪಡುತ್ತಿವೆ.
ಬೇಬ್ಲೇಡ್‍ಗಳು ಮೊದಲು ತಯಾರಾಗಿ ಜನಪ್ರಿಯಗೊಂಡಿದ್ದು ಜಪಾನ್ ದೇಶದಲ್ಲಿ. ತದ ನಂತರ ಯು.ಕೆ., ಯು.ಎಸ್.ಎ. ಮತ್ತು ಜಗತ್ತಿನ ಇತರೆ ರಾಷ್ಟ್ರಗಳಿಗೆ ಇದರ ಜನಪ್ರಿಯತೆ ವ್ಯಾಪಿಸಿತು. ಈಗ ಇದರ ಜನಪ್ರಿಯತೆ ಎಷ್ಟೆಂದರೆ ಹಳ್ಳಿಯ ಮಕ್ಕಳನ್ನು ಸೆಳೆಯುತ್ತಿದೆಯೆಂದರೆ ಆಶ್ಚರ್ಯವಿಲ್ಲ. ಇವುಗಳು ಜಗತ್ತಿನ ಮಕ್ಕಳನ್ನು ಆಕರ್ಷಿಸಿ ಪೂರ್ಣ ಪ್ರಮಾಣದ ಆಟಿಕೆ (ಆಟ) ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ. ಈ ಜನಪ್ರಿಯತೆಯ ಹೆಗ್ಗಳಿಕೆ ಬೇಬ್ಲೇಡ್ 2000, V-Force ಮತ್ತು G-Revolution ಅನ್ನುವ ಮೂರು ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿರುವ ಕಾರ್ಟೂನ್ ನೆಟ್ ವರ್ಕಗೆ ಸಲ್ಲುತ್ತದೆ. ಈ ಆಟಿಕೆಯನ್ನು ಪರಿಚಯಿಸಿದ್ದು ಮಾತ್ರವಲ್ಲ ಅದನ್ನು ಆಡುವ ರೀತಿ ಹಾಗೂ ಅದರಲ್ಲಿಯ ಹೊಸ ಹೊಸ ತಂತ್ರಜ್ಞಾನಗಳನ್ನು ಮತ್ತು ಅವಿಷ್ಕಾರಗಳನ್ನೂ ಈ ಧಾರಾವಾಹಿಗಳ ಮೂಲಕ ಕಾರ್ಟೂನ್ ನೆಟ್‍ವರ್ಕ್ ಪ್ರಸಾರ ಮಾಡುತ್ತಿದೆ.
ಈ ಬೇಬ್ಲೇಡ್‍ಗಳನ್ನು ಹೇಗೆ ಮತ್ತು ಎಲ್ಲಿ ಆಡಬಹುದು?ಸಾಮಾನ್ಯವಾಗಿ ಈ ಆಟವನ್ನು ಮಕ್ಕಳು ಮನೆಯ ಟಾರಸಿಯಲ್ಲೋ ಅಥವಾ ನಯವಾದ ನೆಲದ ಮೇಲೋ ಆಡುತ್ತಾರೆ. ಆದರೆ ಈ ಆಟವನ್ನು ಆಡಲು ನಿರ್ದಿಷ್ಟವಾದ ಸ್ಟೇಡಿಯಂ(Stadium) ಕೂಡ ಇದೆ. ಈ ಸ್ಟೇಡಿಯಂಗಳು ಬೇಬ್ಲೇಡಿಗಿಂತಲೂ ಹೆಚ್ಚು ಬೆಲೆಬಾಳುವುದರಿಂದ ಅದರ ಬದಲು, ಮೇಲ್ತಳದ (ಗುಂಡಿಯಿಲ್ಲದ) ಅಗಲ ಪಾತ್ರೆಯಲ್ಲಿಯೋ, ಟೀ ಟ್ರೇಯಲ್ಲಿಯೋ ಆಡಬಹುದು. ಬೇಬ್ಲೇಡ್‍ಗಳನ್ನು ಸ್ಟೇಡಿಯಂ (ಪೋರ್‍ಟೆಬಲ್ ಪ್ಲೇಗ್ರೌಂಡ್) ಗಳಲ್ಲಿಯೆ ಆಡಿದರೆ ಉತ್ತಮ. ಒಂದು ವೇಳೆ ಈ ಸ್ಟೇಡಿಯಂಗಳಲ್ಲಿ ಆಟ ಆಸಕ್ತಿಯನ್ನು ನೀಡದಿದ್ದರೆ, ಈ ಕೆಳಗೆ ಹೇಳಿದ ಕೆಲವು ರೀತಿಗಳಲ್ಲಿ ಆಡಬಹುದು.
೧. ಸ್ಟೇಡಿಯಂನ ಬದಲು ನಯವಾದ ನೆಲದ ಮೇಲೆ ಆಡಬಹುದು. ತುಂಬಾ ಜನರಿರುವಾಗ ಇದು ಸಶಕ್ತ ಸ್ಥಳವಾಗಿರುತ್ತದೆ. ಎಲ್ಲರೂ ನಿಂತು ಅಥವಾ ಆರಾಮವಾಗಿ ಕುಳಿತು ಆಟವನ್ನು ವೀಕ್ಷಿಸಬಹುದು.೨. ಸಣ್ಣಗಿನ ಅಂಚಿರುವ ಟೀ ಟ್ರೇ ಅಥವಾ ಮೇಲ್ತಳವಿರುವ ಅಗಲವಾದ ಪಾತ್ರೆಯಲ್ಲಿಯೂ ಇದನ್ನು ಆಡಬಹುದು.೩. ಸ್ಟೇಡಿಯಂನ ಮಧ್ಯದಲ್ಲಿರುವ ಪ್ಲಾಸ್ಟಿಕನ್ನು ಹಿಂದಕ್ಕೆ ಸರಿಸಿ (ಈ ಸೌಲಭ್ಯ ಎಲ್ಲಾ ಸ್ಟೇಡಿಯಂಗಳಲ್ಲೂ ಇಲ್ಲ) ಅದನ್ನು ಕವಚಿ ಹಾಕಿ ಅದರಲ್ಲಿಯೂ ಆಡಬಹುದು.೪. ಮಧ್ಯಮ ಗಾತ್ರದ ಅಗಲ ಬಾಯಿಯ ಪಾತ್ರೆಯಲ್ಲಿ ಅರ್ಧದಷ್ಟು ನೀರನ್ನು ತುಂಬಿಸಿ, ಹಿಂದಿನ ದಿನ ಫ್ರೀಜರ್‍ನಲ್ಲಿಟ್ಟು ಮರುದಿನ ತೆಗೆದಾಗ ನೀರು ಐಸ್ ಆಗಿರುತ್ತದೆ. ಇದರ ಮೇಲೂ ಆಡಬಹುದು.೫. ಎರಡು ಕ್ರಿಕೆಟ್ ಸ್ಟಂಪ್ (ಪೋಲ್)ಗಳನ್ನು ಸ್ವಲ್ಪ ಅಂತರದಲ್ಲಿ ನಿಲ್ಲಿಸಿ ಪೆನಲ್ಟಿ ಸ್ಪಾಟ್‍ಗಳನ್ನು ಗುರುತಿಸಿಕೊಂಡು ಮಧ್ಯೆ ಹಗುರವಾದ ಬಾಲ್‍ಗಳನ್ನು ಇಟ್ಟು ಬೇಬ್ಲೇಡ್‍ಗಳನ್ನು ಬಾಲ್‍ಗೆ ತಾಗುವಂತೆ ಮಾಡಿ ಬಾಲ್‍ಗಳು ಪೆನಲ್ಟಿ ಸ್ಪಾಟ್‍ನತ್ತ ಸಾಗುವಂತೆ ಆಡಬಹುದು. ಇದು ಬೇಬ್ಲೇಡಿನಿಂದ ಆಡಬಹುದಾದ ಆಟದ ಒಂದು ಮಾದರಿ.೬. ಬೇಬ್ಲೇಡನ್ನು ಸ್ಟೇಡಿಯಂನ ಬದಿಯಿಂದ ಹರಿಸಿ, ಬೇಬ್ಲೇಡ್ ಮಧ್ಯೆ ಬರುವವರೆಗೆ ಕಾದು, ಡಿಫೆನ್ಸ್ ಬ್ಲೇಡನ್ನು ಸ್ಟೇಡಿಯಂನಲ್ಲಿ ಕಾಯುವಂತೆ ಮಾಡಬಹುದು.೭. ಒಂದೇ ಸ್ಟೇಡಿಯಂನಲ್ಲಿ ಒಂದು ಬಾರಿಗೆ ಎರಡು ಬೇಬ್ಲೇಡ್‍ಗಳನ್ನು ಹಾರಿಸಿ, ಸ್ಪರ್ಧಾತ್ಮಕವಾಗಿಯೂ ಆಡಬಹುದು. ಈ ರೀತಿ ಆಡುವಾಗ ಮುಖವನ್ನು ನಿರ್ದಿಷ್ಟ ಅಂತರದಲ್ಲಿಟ್ಟು ಹಾರಿಸಬೇಕು. ಈ ರೀತಿ ಎರಡು ಬ್ಲೇಡ್‍ಗಳು ಒಂದು ಸ್ಟೇಡಿಯಂನಲ್ಲಿರುವಾಗ ಮುಖ ಹತ್ತಿರವಿಟ್ಟು ನೋಡುವುದಾಗಲಿ ಮಾಡಬಾರದು. ಯಾಕೆಂದರೆ ಸ್ಟೇಡಿಯಂನಲ್ಲಿ ಎರಡು ಬ್ಲೇಡುಗಳು ಸುತ್ತುವಾಗ ಒಂದಕ್ಕೊಂದು ತಾಗಿ ರಪ್ಪನೆ ಹೊರಗೆ ಜಿಗಿಯುವ ಸಾಧ್ಯತೆಗಳಿವೆ.
ಬೇಬ್ಲೇಡ್‍ಗಳನ್ನು ಖರೀದಿಸುವಾಗ ಯಾವ ಬೇಬ್ಲೇಡುಗಳು ಉತ್ತಮವೆಂದು ನಿರ್ಧರಿಸುವುದು ಕಷ್ಟ. ಸಿ.ಡಿ, ಕ್ಯಾಸೆಟ್‍ಗಳು ಪೈರೆಟ್ ಆಗುವಂತೆ ಇಲ್ಲೂ ಡೂಪ್ಲಿಕೇಟ್ ಬೇಬ್ಲೇಡ್‍ಗಳು ಲಭ್ಯ! ಇವು ಮೆಟಲ್ ಹಾಗೂ ಪ್ಲಾಸ್ಟಿಕ್ ಎರಡರಲ್ಲೂ ದೊರೆಯುತ್ತವೆ. ಒರಿಜಿನಲ್ ಬೇಬ್ಲೇಡ್‍ಗಳು ಸುಮಾರು ಇನ್ನೂರೈವತ್ತಕ್ಕಿಂತ ಮೇಲ್ಪಟ್ಟು ದರಗಳಲ್ಲಿ ದೊರೆಯುತ್ತವೆ. ಅದಲ್ಲದೆ ಐವತ್ತು ರೂಪಾಯಿಗಳಿಗೂ ದೊರೆಯುತ್ತವೆ. ಇವು ಪ್ಲಾಸ್ಟಿಕ್‍ನವುಗಳದಾಗಿದ್ದು ಆಕರ್ಷಕವಾಗಿಯೂ ಇರುತ್ತವೆ. ಇದರ ಸ್ಟೇಡಿಯಂ ಬೆಲೆ ಮುನ್ನೂರೈವತ್ತು ರೂಪಾಯಿಗಳಾಗಿರುತ್ತದೆ. ಮಕ್ಕಳು ಈ ಆಟವನ್ನು ಆಡುವಾಗ `ಬ್ಯಾಟಲ್ ಫೀಲ್ಡ್' ಎಂದೆ ಹೇಳುತ್ತಾರೆ. ಇದರ ಜನಪ್ರಿಯತೆಗೆ ಈ ಶಬ್ದವೇ ನಿದರ್ಶನ!
ಬೇಬ್ಲೇಡ್‍ಗಳ ಗುಣಮಟ್ಟವನ್ನು ಅವುಗಳ ರೇಟಿಂಗ್ ಮೇಲೆ ನಿರ್ಧರಿಸಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ ಡ್ರಾಗನ್ (G) rating 8.8/10, ಡ್ರಿಗರ್ V2 8.5/20, ಗೆಲನ್ ಅಟ್ಯಾಕರ್ 7.2/10, ಡ್ರಾಗನ್ V 8.4/10 ಮತ್ತು ಡ್ರಿಗರ್ F 7/10 ಡ್ರಾನ್‍ಜ಼ರ್, ಡ್ರೆಸಿಲ್‍ಗಳು ಅತ್ಯುತ್ತಮವಾದವುಗಳು.
ಬೇಬ್ಲೇಡ್‍ಗಳಲ್ಲಿ ಮುಖ್ಯವಾಗಿ ಬ್ಲೇಡ್, ಲಾಂಚರ್ (ಶೂಟರ್) ಮತ್ತು ವೈಂಡರ್ ಅನ್ನುವ ವಿವಿಧ ಭಾಗಗಳಿವೆ. ಬೇಬ್ಲೇಡ್‍ಗಳ ಬಿಡಿಬಿಡಿಯಾದ ಭಾಗಗಳಾದ ಬ್ಲೇಡ್ ಬೇಸ್, ವ್ಹೈಟ್ ಡಿಸ್ಕ್, ಅಟ್ಯಕ್ ರಿಂಗ್, ಬಿಟ್ ಚಿಪ್ ಮತ್ತು ಸ್ಪಿನ್ ಗೇರ್‍ಗಳನ್ನು. ಸೇರಿಸಿ, ಸ್ಕ್ರೂ ಹಾಕಬೇಕು. ನಂತರ ಲಾಂಚರ್ ಅಥವಾ ಶೂಟರ್‍ನಲ್ಲಿರುವ ಉದ್ದನೆಯ ಹುಕ್ಸ್‍ಗಳಿಗೆ ಫಿಕ್ಸ್ ಮಾಡಬೇಕು. ಲಾಂಚರ್‍ನ ಎರಡು ತುದಿಗಳಿಗಿರುವ ತೂತಿನ ಮೂಲಕ ನಿರ್ದಿಷ್ಟವಾದ ರೀತಿಯಲ್ಲಿ ವೈಂಡರನ್ನು ಈ ತೂತಿಗೆ ಸೇರಿಸಿ, "3-2-1 let it Rip" ಎಂದು ಹೇಳುತ್ತಾ ವೈಂಡರನ್ನು ಬಲವಾಗಿ ಎಳೆದಾಗ ಬೇಬ್ಲೇಡ್‍ಗಳು ಸ್ಟೇಡಿಯಂ ಮೇಲೆ ಬಿದ್ದು ತಿರುಗುತ್ತವೆ.
ಬೇಬ್ಲೇಡ್‍ಗಳನ್ನು ಆಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ. ಅವುಗಳೆಂದರೆ-೧. ಈ ಬೇಬ್ಲೇಡ್‍ಗಳನ್ನು ಎಲ್ಲೆಂದರಲ್ಲಿ ಆಡಬಾರದು. ದೊರಗು ನೆಲದ ಮೇಲೆ ಅಥವಾ ಮಣ್ಣಿನ ನೆಲದ ಮೇಲೆ ಆಡಿದರೆ ಇವು ಹಾಳಾಗುತ್ತವೆ.೨. ಇವುಗಳನ್ನು ನೀರಿನಲ್ಲಿ ಆಡಬಾರದು.೩. ಅತೀ ಎತ್ತರದಿಂದ ಬೇಬ್ಲೇಡ್‍ಗಳನ್ನು ಹಾರಿಸಬರದು. ಇವು ತುಂಬಾ ನಾಜೂಕಾಗಿರುವುದರಿಂದ ಬೇಬ್ಲೇಡುಗಳು ಹಾಳಾಗಬಹುದು.೪. ಬೇಬ್ಲೇಡ್‍ಗಳನ್ನು ನೆಲಕ್ಕೆ ಉಜ್ಜಬಾರದು. ಇದರಿಂದ ತುದಿ (Top point) ತುಂಡಾಗುವ ಸಾಧ್ಯತೆಗಳಿವೆ.೫. ಒಂದು ಬೇಬ್ಲೇಡ್‍ನ ವೈಂಡರ್, ಲಾಂಚರ್‍ಗಳನ್ನು ಇನ್ನೊಂದು ಬೇಬ್ಲೇಡ್‍ಗೆ ಹೊಂದಿಸಬಾರದು. ಇದರಿಂದ ಲಾಂಚರ್, ಬೇಬ್ಲೇಡ್ ಹಾಗೂ ವೈಂಡರ್‍ಗಳು ಹಾಳಾಗುವ ಸಾಧ್ಯತೆಗಳಿವೆ.೬. ಬೇಬ್ಲೇಡನ್ನು ತಲೆಕೆಳಗೆ ಮಾಡಿ ಆಡಬಾರದು.೭. ತಮಾಷೆಗಾಗಿಯಾದರೂ ಇದನ್ನು ಇನ್ನೊಬ್ಬರ ಮೇಲೆ ಹಾರಿಸಬಾರದು. ಅದರ ಡಿಸೈಂಡ್ ತುದಿಗಳು ಶಾರ್ಪ್ ಆಗಿರುತ್ತವೆ. ಎಂಟು ವರ್ಷದ ಕೆಳಗಿನ ಮಕ್ಕಳು ಇದನ್ನು ಆಡುವಾಗ ದೊಡ್ಡವರು ಯಾರಾದರೂ ಗಮನಿಸುವುದು ಅಗತ್ಯ.
ಇವುಗಳೇನೆ ಇದ್ದರೂ ಈ ಬಣ್ಣದ ಬುಗುರಿ ಮುಂಬರುವ ದಿನಗಳಲ್ಲಿ ಜನಪ್ರಿಯ ಒಳಾಂಗಣ ಕ್ರೀಡೆಯಾಗಿ ಗುರುತಿಸುವುದು ಖಂಡಿತ. ಈಗಾಗಲೇ ಬೇಬ್ಲೇಡ್‍ಗಳ ಪಂದ್ಯಾಟಗಳು ನಡೆಯುತ್ತಿರುವುದು ಇದರ ಜನಪ್ರಿಯತೆಗೆ ಉತ್ತಮ ಉದಾಹರಣೆಯಾಗಿದೆ.

No comments:
Post a Comment